ರಾಯಚೂರಿನ ಗ್ರಾಮೀಣ ಪ್ರದೇಶದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಟೂಲ್ಸ್ ಕಿಟ್ ಪಡೆಯಲು ಅರ್ಜಿ ಆಹ್ವಾನ – Free Toolkits Scheme Raichur 2024

Free Toolkits Scheme Raichur 2024 : ಜಿಲ್ಲಾ ಪಂಚಾಯತ್, ರಾಯಚೂರು 2024-25ನೇ ಸಾಲಿನ ಕುಶಲಕರ್ಮಿಗಳಿಗೆ ಉಚಿತವಾಗಿ ಸಲಕರಣೆ ಸರಬರಾಜು ಯೋಜನೆಯಡಿ ಗ್ರಾಮೀಣ ಪ್ರದೇಶದ ವೃತ್ತಿಪರ ಕುಶಲಕರ್ಮಿಗಳಿಗೆ ಪವರ್ ಆಪರೇಟೆಡ್ ಟೂಲ್ಸ್ ಕಿಟ್ ಪಡೆಯಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು, ಅರ್ಹತೆ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Free Toolkits Scheme Raichur 2024 : Scheme Details

ಕಾರ್ಯಕ್ರಮ ವಿವರ : ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತವಾಗಿ ಸುಧಾರಿತ ಸಲಕರಣೆ ಸರಬರಾಜು ಯೋಜನೆ.

ವಿತರಿಸುವ ಟೂಲ್ಸ್ ಕಿಟ್ ಸಂಖ್ಯೆ : ಒಟ್ಟು 528 ಟೂಲ್ಸ್ ಕಿಟ್ ವಿತರಣೆ.

ಟೂಲ್ಸ್ ಕಿಟ್ ಪಡೆಯಲು ಇರಬೇಕಾದ ಅರ್ಹತೆಗಳು :
• ವೃತ್ತಿಪರ ಉಚಿತ ಸುಧಾರಿತ ಸಲಕರಣೆ ಪಡೆಯುವದಕ್ಕಾಗಿ ಜಿಲ್ಲೆಯ ಗ್ರಾಮೀಣ ಪ್ರದೇಶದ ವೃತ್ತಿನಿರತ (ಕಮ್ಮಾರಿಕೆ/ ಬಡಿಗೆತನ/ ದೋಬಿ/ ಕಲ್ಲು ಒಡೆಯುವ/ ಗೋಡೆ ಕಟ್ಟುವ/ ಕ್ಷೌರಿಕ) ಕುಶಲಕರ್ಮಿಗಳಿಗೆ ಮಾತ್ರ ಅರ್ಜಿ ಸಲ್ಲಿಸತಕ್ಕದ್ದು (ಪಟ್ಟಣಪಂಚಾಯತ್/ ಪುರಸಭೆ/ ನಗರಸಭೆಗೊಳಪಡುವವರು ಈ ಯೋಜನೆಗೆ ಅರ್ಹರಲ್ಲ)
• ಒಂದು ಕುಟುಂಬಕ್ಕೆ ಒಂದು ಅರ್ಜಿ ಸಲ್ಲಿಸಲು ಮಾತ್ರ ಅವಕಾಶವಿರುತ್ತದೆ.
• ಸರಕಾರದ ಯಾವುದೇ ಯೋಜನೆಯಡಿ ಈಗಾಗಲೇ ಉಚಿತ ಸುಧಾರಿತ ಸಲಕರಣೆ ಪಡೆದಿರುವ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅರ್ಹವಿರುವುದಿಲ್ಲ.
• ಸರ್ಕಾರಿ ನೌಕರರು ಅಥವಾ ಅವರ ಅವಲಂಬಿತರ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.

ಅಪ್ಲೋಡ್ ಮಾಡಬೇಕಾದ ದಾಖಲೆಗಳು :
• ಲೇಬರ್ ಕಾರ್ಡ್.
• ಆಧಾರ ಕಾರ್ಡ್.
• ಪಡಿತರ ಚೀಟಿ.
• ಜಾತಿ ಪ್ರಮಾಣ ಪತ್ರ (ಪ.ಜಾತಿ/ಪ.ಪಂಗಡ/ಅಲ್ಪಸಂಖ್ಯಾತರ ಅಭ್ಯರ್ಥಿಗಳಿಗೆ ಮಾತ್ರ)
• ಆಯಾ ಗ್ರಾಮ ಪಂಚಾಯತಿಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಂದ ವೃತ್ತಿ ಮಾಡುತ್ತಿರುವ ಬಗ್ಗೆ ದೃಢೀಕರಣ ಪ್ರಮಾಣ ಪತ್ರ.
• ಅಭ್ಯರ್ಥಿ ವಿಕಲಚೇತನ/ವಿಧವಾ ಪ್ರಮಾಣ ಪತ್ರ ಇದ್ದಲ್ಲಿ.
• ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರ.

ಅರ್ಜಿ ಸಲ್ಲಿಕೆಯ ವಿಧಾನ :
• ಅರ್ಜಿದಾರರು ಈ ಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
• ಅರ್ಜಿ ಸಲ್ಲಿಸುವ ಅರ್ಜಿದಾರರು ರಾಯಚೂರು ಜಿಲ್ಲಾ ಪಂಚಾಯತ್ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ. ಅಪ್ಲಿಕೇಷನ್ ನಲ್ಲಿ ಅಗತ್ಯವಿರುವ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಿ (ಉದಾಹರಣೆಗೆ ಅರ್ಜಿದಾರದ ವೈಯಕ್ತಿಕ ವಿವರ, ವಿಳಾಸ, ಇತ್ಯಾದಿ) ನಂತರ ನಿಗದಿತ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಿ.
• ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಅರ್ಜಿಯ ಪ್ರತಿಯೊಂದಿಗೆ ಅಪ್ಲೋಡ್ ಮಾಡಲಾದ ಎಲ್ಲಾ ದಾಖಲಾತಿಗಳ ಒಂದು ಪ್ರತಿಯನ್ನು ಉಪ ನಿರ್ದೇಶಕರ ಕಛೇರಿ (ಗ್ರಾಮೀಣ ಕೈಗಾರಿಕೆ) ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಹೈದರಾಬಾದ್ ರಸ್ತೆ, ರಾಯಚೂರು ಇಲ್ಲಿ ಕಡ್ಡಾಯವಾಗಿ ಸಲ್ಲಿಸುವುದು.

ಅರ್ಜಿ ಸಲ್ಲಿಕೆಗೆ ನಿಗದಿಪಡಿಸಿರುವ ದಿನಾಂಕ :
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 13 ಸೆಪ್ಟೆಂಬರ್, 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15 ಅಕ್ಟೋಬರ್, 2024

Free Toolkits Scheme Karnataka 2024 : Important Links

NOTIFICATIONCLICK HERE
APPLY ONLINE CLICK HERE
TELEGRAM JOIN LINK CLICK HERE
WHATSAPP GROUP LINK CLICK HERE

ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.

Leave a Comment